ಕಾರಿಂಜೇಶ್ವರ ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಪುಂಡಾಟ ಮೆರೆದಿದ್ದ ನಾಲ್ವರು ಅರೆಸ್ಟ್…

85
firstsuddi

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ಪುಂಡಾಟ ಮೆರದಿದ್ದ ನಾಲ್ವರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಬಶೀರ್ ರೆಹಮಾನ್ (20), ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಇಸ್ಮಾಯೀಲ್ ಅರ್ಹ ಮಾಜ್ (22), ಉಳ್ಳಾಲ ಹಳೆಕೋಟೆ ನಿವಾಸಿ ಮುಹಮ್ಮದ್ ತಾನಿಶ್ (19) ಹಾಗೂ ಬಬ್ಬುಕಟ್ಟೆ ಪೆರ್ಮನ್ನೂರು ನಿವಾಸಿ ಮುಹಮ್ಮದ್ ರಶಾದ್(19) ಎಂದು ಗುರುತಿಸಲಾಗಿದೆ.​​ 

ಬಂಟ್ವಾಳ ತಾಲ್ಲೂಕು ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಆರೋಪಿಗಳು ಚಪ್ಪಲಿ ಧರಿಸಿಕೊಂಡು ಪ್ರವೇಶ ಮಾಡಿದಲ್ಲದೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಈ ಪುಂಡರ ವಿರುದ್ಧ ಕಾನೂನು ಕ್ರಮವಹಿಸಿಕೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದರು.