ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ, ಒಂದೇ ಕುಟುಂಬದ ಐವರ ಸಾವು…

191
firstsuddi

ಬೆಂಗಳೂರು : ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದ್ದು, ಬೆಂಗಳೂರಿನ ಕೋರಮಂಗಲದಲ್ಲಿ ಗ್ರಾನೆಟ್ ಉದ್ಯಮ ನಡೆಸುತ್ತಿದ್ದ ಉದ್ಯಮಿ ಶ್ರೀನಾಥ್ ರೆಡ್ಡಿ, ಪತ್ನಿ ಚಂದ್ರಮಾಲಾ, ಪುತ್ರಿ ಶಾಲಿನಿ, ಪುತ್ರ ಭರತ್ ಹಾಗೂ ಅಳಿಯ ಸಂದೀಪ್ ಮೃತ ದುರ್ಧೈವಿಗಳು ಎನ್ನಲಾಗಿದ್ದು, ಮೃತರು ತಮಿಳುನಾಡಿನ ಅಣ್ಣಾಮಲೈಯರ್ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.