ಮೂಡಿಗೆರೆ : ತಮ್ಮ ಜೀವವನ್ನು ಪಣಕ್ಕಿಟ್ಟು ರಕ್ಷಣೆ ಮಾಡಿದ ಭಾರತೀಯ ಯೋಧರಿಗೆ ಕಣ್ಣೀರಿನ ವಿದಾಯ…

663

ಮೂಡಿಗೆರೆ : ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಲೇಖಾನ್ ಹೊರಟ್ಟಿ ಗ್ರಾಮಸ್ಥರನ್ನು ಭಾರತೀಯ ಯೋಧರು ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದರು. ಈ ವೇಳೆ ತಮ್ಮ ಕರ್ತವ್ಯವನ್ನು ಮುಗಿಸಿ ತೆರಳುತ್ತಿದ್ದ ಪ್ರತಿಯೊಬ್ಬ ಬಾರತೀಯ ಯೋಧರಿಗೆ ಮೂಡಿಗೆರೆಯ ಜನತೆ ರಾಖಿ ಕಟ್ಟಿ ಕಣ್ಣೀರಿನ ವಿದಾಯ ಕೋರಿದ್ದಾರೆ. ಅಲ್ಲದೇ ಸಂತ್ರಸ್ತರು ನಿಮ್ಮಿಂದಾಗಿಯೇ ನಮ್ಮ ಪ್ರಾಣ ಉಳಿದಿದೆ ಎಂದು ಕೈಮುಗಿದು ಕೃತಜ್ಞತೆ ತಿಳಿಸಿದರು. ಬಳಿಕ ಮಾತನಾಡಿದ ಭಾರತೀಯ ಸೈನಿಕರು, ನೀವು ಇದ್ದರೆ ನಾವು ಇದ್ದ ಹಾಗೆ, ನಾವೆಂದಿಗೂ ನಿಮ್ಮ ಜೊತೆಯಲ್ಲಿಯೇ ಇರುತ್ತೇವೆ.ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಸಿದ್ಧ. ದೇಶ ಸೇವೆಗೆ ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಹೇಳಿ ಯೋಧರು ತಂದಿದ್ದ ಬಿಸ್ಕೆಟ್, ಹಣ್ಣುಗಳನ್ನು ಸಂತ್ರಸ್ತರಿಗೆ ನೀಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.