ಕಾರ್ಕಳ: ಹೊಸ ವರ್ಷಕ್ಕೆ ಶುಭಾಶಯ ಬರೆಯುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವು…

227
firstsuddi

ಕಾರ್ಕಳ : ರಸ್ತೆಯಲ್ಲಿ ಹೊಸ ವರ್ಷಕ್ಕೆ ಶುಭಾಶಯ ಬರೆಯಲು ಮುಂದಾದ ಯುವಕರಿಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಇಬ್ಬರು  ಮೃತಪಟ್ಟಿರುವ  ಘಟನೆ ತಾಲೂಕಿನ ಮೀಯಾರು ಕಾಜರಬೈಲು ಎಂಬಲ್ಲಿ ನಡೆದಿದೆ. ಮೃತ ಯುವಕರನ್ನು ಮೂಲತಃ ಬಾಗಲಕೋಟೆಯವರಾದ ಶರಣ್ (32) ಸಿದ್ದು (28) ಎಂದು ಗುರುತಿಸಲಾಗಿದೆ. ಮೃತ ಯುವಕರು ನಿನ್ನೆ ಮಧ್ಯರಾತ್ರಿ ರಸ್ತೆಯಲ್ಲಿ ಹ್ಯಾಪ್ಫಿ ನ್ಯೂಯರ್ ಎಂದು ಬರೆಯುತ್ತಿದ್ದ ವೇಳೆ ವೇಗದಿಂದ ಬಂದ ಈಕೋ ಕಾರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಜೆಸಿಬಿ ಮತ್ತು ಟಿಪ್ಪರ್ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.