ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಬಂದ ಏಜೆಂಟ್.

52
firstsuddi

ಉಡುಪಿ: ಕಾಲಿಗೆ ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಏಜೆಂಟ್‌ನನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭೆ ಚನಾವಣೆಯ ಫಲಿತಾಂಶ ಆರಂಭವಾಗಿದೆ. ಫಲಿತಾಂಶದ ಹಿನ್ನೆಲೆಯಲ್ಲಿ ಏಜೆಂಟರ್‌ಗಳು ಮತಕೇಂದ್ರಗಳತ್ತ ಬಂದಿದ್ದರು. ಈ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಏಜೆಂಟ್ ಎಂದು ಯುವಕನೊಬ್ಬ ಮತಕೇಂದ್ರಕ್ಕೆ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಲುಂಗಿ ತೊಟ್ಟು, ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾನೆ.

ಮೆಟಲ್ ಡಿಟೆಕ್ಟರ್ ವೇಳೆ ಮೊಬೈಲ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸದಾಶಿವ ಕಂಚಿಕೋಡು ಎಣಿಕಾ ಕೇಂದ್ರದ ದ್ವಾರದಲ್ಲೇ ಏಜೆಂಟ್‌ನನ್ನು ಪೊಲೀಸರು ತಡೆಹಿಡಿದು, ಆತನಿಂದ ಮೊಬೈಲ್ ಕಸಿದುಕೊಂಡು ಹೊರ ಕಳುಹಿಸಿದ್ದಾರೆ.