ಕಾಲೇಜು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಡಿಕ್ಕಿ : ಓರ್ವ ವಿದ್ಯಾರ್ಥಿನಿ ಸಾವು, ಇಬ್ಬರಿಗೆ ಗಾಯ…

49
firstsuddi

ಶಿವಮೊಗ್ಗ : ಕಾಲೇಜು ವಿದ್ಯಾರ್ಥಿನಿಯರಿಗೆ ಟಿಪ್ಪರ್ ಡಿಕ್ಕಿಯಾಗಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಸಾಗರದ ಸಣ್ಣಮನೆ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಯಲವಟ್ಟಿ ಗ್ರಾಮದ ಪ್ರತಿಮಾ(18) ಮೃತ ವಿದ್ಯಾರ್ಥಿನಿ. ಮೂವರು ವಿದ್ಯಾರ್ಥಿನಿಯರು ಸಾಗರದ ಸರ್ಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಹಾಸ್ಟೆಲ್ ನಿಂದ ಕಾಲೇಜಿಗೆ ತೆರಳುವ ವೇಳೆ ಟಿಪ್ಪರ್ ಗುದ್ದಿದೆ. ಅಪಘಾತದಲ್ಲಿ ಪ್ರತಿಮಾ ತಲೆಗೆ ತೀವ್ರ ಗಾಯವಾಗಿ ಅಸ್ವಸ್ಥಳಾಗಿದ್ದಳು.

ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇನ್ನೂ ಅಂಕಿತಾ, ಐಶ್ವರ್ಯ ಎಂಬ ಮತ್ತಿಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕನ ಅಜಾಗರೂಕತೆ, ಅತಿವೇಗವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.