ಕುಡಿದ ಅಮಲಿನಲ್ಲಿ ಎರಡನೇ ಮಹಡಿಯಿಂದ ಬಿದ್ದ ಎಂಬಿಬಿಎಸ್ ವಿದ್ಯಾರ್ಥಿ…

90
firstsuddi

ಹುಬ್ಬಳ್ಳಿ : ಕುಡಿದ ಅಮಲಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಪುನೀತ್ ಕುಡಿದ ಮತ್ತಿನಲ್ಲಿ ಕಿಮ್ಸ್ ಆವರಣದಲ್ಲಿನ ಆನಂದ ಹಾಸ್ಟೆಲ್ ನ ಎರಡನೆಯ ಮಹಡಿಯಿಂದ ಬಿದ್ದಿದ್ದಾನೆ.

ಸದ್ಯ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.