ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಸಂದೇಶ್, ಉಪಾಧ್ಯಕ್ಷರಾಗಿ ಜೈರಾಮ್ ಆಯ್ಕೆ…

63
firstsuddi

ಚಿಕ್ಕಮಗಳೂರು : ತಾಲ್ಲೂಕಿನ ಅಂಬಳೆ ಹೋಬಳಿಯ ಮಳಲೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎನ್.ಸಂದೇಶ್ ಹಾಗೂ ಉಪಾಧ್ಯಕ್ಷರಾಗಿ ಜಿ.ಜೈರಾಮ್ ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜೆಡಿಎಸ್ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಸಂಘದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಂಘವನ್ನು ಸದೃಡವಾಗಿ ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಕೃಷಿ ಸಂಘದಲ್ಲಿ ಬೆಳೆಸಾಲ ಸೇರಿದಂತೆ ಅನೇಕ ಯೋಜನೆಗಳಿವೆ. ಅದನ್ನು ರೈತರು ಸದುಪ ಯೋಗಪಡಿಸಿಕೊಳ್ಳಬೇಕು. ಸಾಲವನ್ನು ಪಡೆದ ನಂತರ ಪ್ರಾಮಾಣಿಕವಾಗಿ ಹಿಂತಿರುಗಿಸಿ ಹೊಸ ಸಾಲವನ್ನು ಪಡೆದು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್‍ಅಜಿತ್‍ಕುಮಾರ್ ಮಾತನಾಡಿ ಪ್ರತಿಯೊಬ್ಬರ ಸದಸ್ಯರ ಸಲಹೆ, ಸಹಕಾರವನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅನುಸರಿಸಿ ಕೆಲಸ ಮಾಡುವುದರಿಂದ ಸಂಘಕ್ಕೂ ಹಾಗೂ ಗ್ರಾಮಕ್ಕೂ ಉತ್ತಮ ಹೆಸರು ಲಭಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಂಬಳೆ ಹೋಬಳಿ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಜಗನ್ನಾಥ್ ಕದ್ರಿಮಿದ್ರಿ, ಮಾಜಿ ತಾ.ಪಂ. ಸದಸ್ಯ ಮಹೇಶ್ ಕಂಚೇನಹಳ್ಳಿ, ಗ್ರಾ.ಪಂ. ಸದಸ್ಯ ದರ್ಶನ್, ಜೆಡಿಎಸ್ ಮುಖಂಡರುಗಳಾದ ಪ್ರಸನ್ನ, ಪರಮೇಶ್, ಪ್ರತಾಪ್, ಸೋಮಣ್ಣ, ಚಂದ್ರೆಗೌಡ, ಕುಮಾರ್‍ಶೆಟ್ಟಿ, ವಿನಯ್, ಕೆ.ಬಿ.ಅಶೋಕ್, ಕೆ.ಆರ್.ಲೋಕಪ್ಪಗೌಡ, ಬಸವೇಗೌಡ, ಜಗದೀಶ್, ಗಂಗೇಗೌಡ, ಜೂಲೆಗೌಡ, ವಿಜಯ್, ಜಗದೀಶ್, ಸುರೇಶ್, ಸೊಸೈಟಿ ವ್ಯವಸ್ಥಾಪಕ ರವಿಕುಮಾರ್ ಮುಂತಾದವರು ಹಾಜರಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ಸಂಧ್ಯಾರಾಣಿ ಘೋಷಿಸಿದರು. ನಂತರ ಮಳಲೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬಿ.ಬಿ.ನಿಂಗಯ್ಯ ಹಾಗೂ ರಂಜನ್ ಅಜಿತ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು.