ಕೆಎಸ್​ಆರ್​ಟಿಸಿಯ 100 ಹೊಸ ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಸಿಎಂ ಚಾಲನೆ…

39
firstsuddi

ಬೆಂಗಳೂರು: ಕೆಎಸ್​ಆರ್​ಟಿಸಿ ವತಿಯಿಂದ ನೂತನ 100 ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ಏಪ್ರಿಲ್ ವೇಳೆಗೆ 800 ಅಶ್ವಮೇಧ ಕ್ಲಾಸಿಕ್ ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಇಂದು ಮೊದಲ ಹಂತದಲ್ಲಿ 100 ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್, ಕೆಎಸ್​ಆರ್​ಟಿಸಿ ನಿಗಮ ಮಂಡಳಿ ಅಧ್ಯಕ್ಷ ಗುಬ್ಬಿ ಶ್ರೀನಿವಾಸ್, ಎನ್.ವಿ.ಪ್ರಸಾದ್, ಕೆಎಸ್​ಆರ್​ಟಿಸಿ ಎಂಡಿ ಅನ್ಬುಕುಮಾರ್ ಭಾಗಿಯಾಗಿದ್ದರು.

ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆಯೇನು?
* ಎಕ್ಸ್‌ಪ್ರೆಸ್ ಹೆಸರಿನಲ್ಲಿ ಬಸ್ ಆಪರೇಟ್ ಆಗಲಿದೆ. ವಾಹನದ ಎತ್ತರ 3.4 ಮೀಟರ್ ಇದೆ. 50ಕ್ಕೂ ಹೆಚ್ಚು ಆಸನಗಳನ್ನ ಒಳಗೊಂಡಿದೆ. ಎತ್ತರದ, ಉತ್ತಮ ಗುಣಮಟ್ಟದ ಕುಷನ್ ಮತ್ತು ರೆಕ್ಸಿನ್ ಒಳಗೊಂಡ ಆಸನಗಳಿವೆ. ಪ್ರತಿ ಆಸನದ ಹಿಂಬದಿಯಲ್ಲಿ ಮ್ಯಾಗ್ ಜಿನ್ ಹಾಗೂ ವಾಟರ್ ಪೌಚ್‌ನ ಸೌಲಭ್ಯ ಒಳಗೊಂಡಿದೆ.

* ಅಶ್ವಮೇಧ ಕ್ಲಾಸಿಕ್ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮೆರಾ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬಸ್ ಒಳಗೆ ಮತ್ತು ಹೊರಗೆ ಎಲ್ಇಡಿ ಮಾರ್ಗ ಫಲಕ ಅಳವಡಿಸಲಾಗಿದೆ. ಈ ಬಸ್‌ಗಳು ರಾಜಧಾನಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಂಚರಿಸಲಿವೆ. ಇನ್ನು ಈ ಅಶ್ವಮೇಧ ಕ್ಲಾಸಿಕ್ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.