ಕೆಎಸ್​ಆರ್​ಟಿಸಿ ಬಸ್ ಹರಿದು ಬಾಲಕ ಸಾವು…

58
firstsuddi

ಮೈಸೂರು : ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ಬಳಿ ನಡೆದಿದೆ.

ಹೆಚ್​ಡಿ ಕೋಟೆ ತಾಲೂಕಿನ ನಂಜೀಪುರ ಗ್ರಾಮದ ಪ್ರಜ್ವಲ್(14) ಮೃತ ಬಾಲಕ. ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.