ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದಯೋನ್ಮುಖ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸಲು ಇಂದು ಬಜೆಟ್‍ನಲ್ಲಿ ಸ್ಟಾರ್ಟ್ಅಪ್‌ಗಳಿಗೆ ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ. ಸರ್ಕಾರವು ಸ್ಟಾರ್ಟ್ಅಪ್‌ಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವತ್ತ ಗಮನಹರಿಸುತ್ತಿರುವ ಹಿನ್ನೆಲೆ ಈ ಘೋಷಣೆ ಮಾಡುವುದು ತುಂಬಾ ಮಹತ್ವದ್ದಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಇಲ್ಲಿಯವರೆಗೆ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ಗುರುತಿಸಲಾಗಿದೆ. ಜ.16, 2016 ರಂದು ಸ್ಟಾರ್ಟ್‍ಅಪ್ ಇಂಡಿಯಾಕ್ಕಾಗಿ ಕ್ರಿಯಾ ಯೋಜನೆ ಅನಾವರಣ ಮಾಡಲಾಯಿತು. ಸ್ಟಾರ್ಟ್ಅಪ್ ಕಂಪನಿಗಳಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಲು ರೂಪಾಯಿ 10 ಸಾವಿರ ಕೋಟಿ ನಿಧಿ ಯೋಜನೆ ಆರಂಭಿಸಲಾಯಿತು. ಡಿಪಿಐಐಟಿ ಮೇಲ್ವಿಚಾರಣಾ ಸಂಸ್ಥೆಯಾಗಿದ್ದು, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಎಫ್‍ಎಫ್‍ಎಸ್‍ಗೆ ಕಾರ್ಯಾಚರಣಾ ಸಂಸ್ಥೆಯಾಗಿ ಕೆಲಸ ಮಾಡಲಿದೆ. ಯೋಜನೆಯ ಪ್ರಗತಿ ಮತ್ತು ನಿಧಿಯ ಲಭ್ಯತೆಯ ಆಧಾರದ ಮೇಲೆ 14 ಮತ್ತು 15 ನೇ ಹಣಕಾಸು ಆಯೋಗದ ಸರ್ಕಲ್‍ಗಳಲ್ಲಿ ಒಟ್ಟು ರೂಪಾಯಿ ಹತ್ತು ಸಾವಿರ ಕೋಟಿ ನಿಧಿಯನ್ನು ಒದಗಿಸಲು ಯೋಜಿಸಲಾಗಿತ್ತು. ಈ ಯೋಜನೆಯಲ್ಲಿ 3 ಹಂತಗಳಲ್ಲಿ ಸ್ಟಾರ್ಟ್ಅಪ್‌ಗಳಿಗೆ ಬಂಡವಾಳ ಲಭ್ಯವಾಗುವಂತೆ ಮಾಡುವುದಲ್ಲದೆ. ದೇಶೀಯ ಬಂಡವಾಳವನ್ನು ಸಂಗ್ರಹಿಸಲು ಅನುಕೂಲವಾಗುವಂತೆ, ವಿದೇಶಿ ಬಂಡವಾಳದ ಮೇಲಿನ ಅವಲಂಬನೆ ಕಡಿಮೆ ಮಾಡಲು ಹಾಗೂ ದೇಶೀಯ ಹೊಸ ಸಾಹಸೋದ್ಯಮ ಬಂಡವಾಳ ನಿಧಿಗಳನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ತ್ವರಿತವಾಗಿರುವಂತಹ ಪಾತ್ರ ವಹಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.










