ಕೇರಳ ಸಿಎಂ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದ ಇಡಿ…

43
firstsuddi

ತಿರುವನಂತಪುರಂ : ಲೈಫ್ ಮಿಷನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ಲೈಫ್ ಮಿಷನ್ ಯೋಜನೆಗೆ ರೆಡ್ ಕ್ರೆಸೆಂಟ್ ಬಿಡುಗಡೆ ಮಾಡಿದ 18.50 ಕೋಟಿ ರೂ. ಪೈಕಿ 14.50 ಕೋಟಿ ರೂ.ಗಳನ್ನು ಬಳಸಿ 140 ಕುಟುಂಬಗಳಿಗೆ ತ್ರಿಶ್ಯೂರ್ ಜಿಲ್ಲೆಯ ವಡಕ್ಕಂಚೆರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಉಳಿದ ಮೊತ್ತವನ್ನು ಬಳಸಿಕೊಂಡು ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ವಿಚಾರದಲ್ಲಿ ಶಿವಶಂಕರ್ ಅವರು ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಶಿವಶಂಕರ್ ಜೊತೆ ಸೇರಿಕೊಂಡು ಮತ್ತೊಬ್ಬ ಆರೋಪಿ ಸ್ವಪ್ನ ಸುರೇಶ್ 4.48 ಕೋಟಿ ರೂ.ಗಳನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಯುಎನ್ ಐಟಿಎಸಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಈಪನ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶಿವಶಂಕರ್ ಕೈವಾಡ ಇದೆ ಎಂದು ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸರಿತ್ ಪಿ.ಎಸ್ ಆರೋಪಿಸಿದ್ದಾರೆ.