ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ – ಜನರಲ್ಲಿ ಆತಂಕ…

62
firstsuddi

ಕೊಡಗು : ಜಿಲ್ಲೆಯ ಹಲವೆಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜಿಲ್ಲೆಯ ಜನ ಭಯ ಭೀತರಾಗಿದ್ದಾರೆ.

ಬೆಳಗ್ಗೆ 7.45 ರ ಸುಮಾರಿಗೆ 3.4 ಸೆಕೆಂಡುಗಳ ಕಾಲ ಕೊಡಗಿನ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಮತ್ತು ಸುಳ್ಯದ ಸಂಪಾಜೆ , ಗೂನಡ್ಕ, ಗುತ್ತಿಗಾರು ಸೇರಿದಂತೆ ಕೆಲವೆಡೆ ಭೂಕಂಪನ ಅನುಭವವಾಗಿದೆ. ಸುಳ್ಯದಲ್ಲೂ ಭಾರೀ ವಿಚಿತ್ರ ಶಬ್ದದೊಂದಿಗೆ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ. ಜನರು ಆತಂಕದಲ್ಲಿ ಮನೆಯಿಂದ ಹೊರ ಬಂದಿದ್ದಾರೆ. ಪಾತ್ರೆಗಳು, ಪೀಠೋಪಕರಣಗಳು ಅಲುಗಾಡಿವೆ.

ಒಂದು ವಾರದ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಇದೀಗ ಜನರಲ್ಲಿ ಆತಂಕ ಮೂಡಿಸಿದೆ.