ಕೊರೋನಾ ಹಾವಳಿ – ಜನನಿಬಿಡ ಪ್ರದೇಶಗಳಲ್ಲಿ ಇದೀಗ ಜಾನುವಾರು, ನವಿಲುಗಳು…

262
firstsuddi

ಮುಂಬಯಿ : ಕೊರೋನಾದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಮುಂಬಯಿ ಪರಿಸರದಲ್ಲಿ ಹೊರಗೆ ಹೋಗುತ್ತಿರುವ ಡಾಕ್ಟರ್ ಗಳು, ನರ್ಸ್ ಗಳು, ಪೋಲೀಸರು ಮಾತ್ರವಲ್ಲದ ಅಗತ್ಯ ಸಾಮಾನುಗಳನ್ನು ಪೂರೈಸುವ ಜನರು ಹಾಗೂ ಕೆಲವು ಸರಕಾರಿ ನೌಕರರನ್ನು ಮಾತ್ರ ಕಾಣಬಹುದು. ಆದರೆ ಮನೆಯಲ್ಲಿನ ದೈನಂದಿನ ಉಪಯೋಗಿಸುವ ಸಾಮಾಗ್ರಿಗಳು ಈಗಾಗಲೇ ಮುಗಿದಿದ್ದು ಕೆಲವರು ಮಾರು ಕಟ್ಟೆಗೆ ಹೋಗಲೇ ಬೇಕಾಗಿದ್ದು ಮುಂಬಯಿಯ ಕೆಲವು ತರಕಾರಿ ಮಾರುಕಟ್ಟೆಗಳು ಕೆಲವೊಮ್ಮೆ ತೆರೆದಿಟ್ಟಲ್ಲಿ ಜನರು ಅಂತರವನ್ನು ಲೆಕ್ಕಿಸದೆ ಒಂದೆಡೆ ಸೇರಿ ಖರೀದಿಸುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಪೋಲೀಸರು ನಿಯಂತ್ರಣ ಗೊಳಿಸಬೇಕಾಗುತ್ತದೆ. ಮಹಾನಗರದ ಬೋರಿವಲ್ಲಿ ಪೂರ್ವದ ಪ್ರಸಿದ್ದ ನ್ಯಾಷನಲ್ ಪಾರ್ಕ್ ಹೆಚ್ಚಿನ ದಿನಗಳಲ್ಲಿ ಜನರಿಂದ ತುಂಬಿಕೊಂಡಿರುತ್ತಿದ್ದು ಇದೀಗ ಜನರಿಲ್ಲದೆ ಪ್ರಾಣಿಗಳು ಅಲ್ಲಿ ತಿರುಗಾಡುತ್ತಿದೆ. ಇದಲ್ಲದೆ ಮಹಾನಗರದ ಇತರ ಕೆಲವೆಡೆ ರಸ್ತೆಗಳಲ್ಲಿ ಹಾಗೂ ವಾಹನಗಳ ಮೇಲೆ ನವಿಲುಗಳು ತಮ್ಮ ಸಮಯವನ್ನು ಕಳೆಯುತ್ತಿರುವುದನ್ನು ಕಾಣಬಹುದು.