ಕೊಲಂಬೊ : ಸರಣಿ ಬಾಂಬ್ ಸ್ಪೋಟಗೊಂಡು 5 ಮಂದಿ ಜೆಡಿಎಸ್ ಕಾರ್ಯಕರ್ತರ ಸಾವು…

203
firstsuddi

ಶ್ರೀಲಂಕಾ : ಕೊಲಂಬೊದಲ್ಲಿ ಈಸ್ಟರ್ ಸಂಡೇ ದಿನ ಸರಣಿ ಬಾಂಬ್ ಸ್ಪೋಟಗೊಂಡು 290ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸರಣಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಸ್ಪೋಟಗೊಂಡು ಮೃತಪಟ್ಟವರಲ್ಲಿ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರವನ್ನು ಮುಗಿಸಿಕೊಂಡು ಬೆಂಗಳೂರಿನಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ 7 ಮಂದಿ ಜೆಡಿಎಸ್ ಕಾರ್ಯಕರ್ತರಲ್ಲಿ 5 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಉಳಿದ ಇಬ್ಬರು ನಾಪತ್ತೆಯಾಗಿದ್ದಾರೆ. ಸ್ಪೋಟದಲ್ಲಿ ಮೃತಪಟ್ಟವರು ಬೆಂಗಳೂರಿನ ಕೆಜಿ ಹನುಮಂತರಾಯಪ್ಪ, ಲಕ್ಷ್ಮಿನಾರಾಯಣ, ತುಮಕೂರಿನ ಪಿಡಬ್ಲ್ಯುಡಿ ಗುತ್ತಿಗೆದಾರರಾದ ರಮೇಶ್, ಶಿವಣ್ಣ ಹಾಗೂ ಎಂ. ರಂಗಪ್ಪ ಎಂದು ಗುರುತಿಸಲಾಗಿದೆ.