ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ-ಸಂಜನಾ ದಂಪತಿಗೆ ಗಂಡು ಮಗು…

64
firstsuddi

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ದಂಪತಿಗೆ ಗಂಡು ಮಗು ಜನಿಸಿದೆ.

ಸ್ವತಃ ಈ ವಿಚಾರವನ್ನು ಬುಮ್ರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಮಗುವಿನ ಹೆಸರನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಂಗದ್ ಎಂದು ಮಗನಿಗೆ ನಾಮಕರಣ ಮಾಡಿರುವುದಾಗಿ ಬುಮ್ರಾ ತಿಳಿಸಿದ್ದಾರೆ.

ಫೋಟೋದೊಂದಿಗೆ ಬುಮ್ರಾ ಅವರು, ಇಂದು ಮುಂಜಾನೆ ನಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ನಾವೀಗ ಚಂದ್ರನ ಮೇಲೆ ತೇಲುತ್ತಿದ್ದೇವೆ. ಹೊಸ ಸದಸ್ಯರೊಂದಿಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಕಾತುರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರು 2021ರ ಮಾರ್ಚ್ 15ರಂದು ದಾಂಪತ್ಯ
ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ತನ್ನ ಪತ್ನಿಯ ಜೊತೆಗಿರಲು ಬುಮ್ರಾ ಏಷ್ಯಾ ಕಪ್ 2023ನಿಂದ ದೂರ ಉಳಿದಿದ್ದರು.

ಸದ್ಯ ಬುಮ್ರಾ ಅವರು ಪತ್ನಿ ಮತ್ತು ಮಗುವಿನ ಜೊತೆ ಮುಂಬೈನಲ್ಲಿದ್ದು, ಇಂದು ನಡೆಯಲಿರುವ ನೇಪಾಳ ವಿರುದ್ಧದ ಪಂದ್ಯಕ್ಕೆ ಗೈರಾಗಲಿದ್ದಾರೆ. ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.