ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ…

97
firstsuddi

ಚೆನ್ನೈ : ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಇಂದು 78ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಇಳಯರಾಜ ಅವರು ತಮಿಳು, ಕನ್ನಡ, ಮಲಯಾಳಂ, ತೆಲುಗು ಮತ್ತು ಮರಾಠಿ ಸೇರಿದಂತೆ ದಕ್ಷಿಣ ಭಾರತದ ಸುಮಾರು 3 ಸಾವಿರ ಚಲಚಿತ್ರಗಳು ಮತ್ತು 10 ಸಾವಿರದಷ್ಟು ಗೀತೆಗಗಳಿಗೆ ಸಂಗೀತ ನೀಡಿದ್ದು, ಈ ಮೂಲಕ ಅವರು ಸಂಗೀತ ಲೋಕದ ರಾಜ ಎಂದೇ ಖ್ಯಾತಿ ಗಳಿಸಿದ್ದಾರೆ.

ನನ್ನ ನೀ ಗೆಲ್ಲಲಾರೆ, ಗೀತಾ, ಜನ್ಮ ಜನ್ಮದ ಅನುಬಂಧ, ನಮ್ಮೂರು ಮಂದಾರ ಹೂವೆ, ಪಲ್ಲವಿ ಅನುಪಲ್ಲವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ಇಳಯರಾಜ ಅವರು ಕನ್ನಡಿಗರ ಮನ ಗೆದ್ದಿದ್ದಾರೆ.

ಇಳಯರಾಜ ಅವರಿಗೆ 2010ರಲ್ಲಿ ಪದ್ಮಶ್ರೀ ಮತ್ತು 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿವೆ. ಇದರೊಂದಿಗೆ ಒಟ್ಟು 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇಳಯರಾಜ ಅವರಿಗೆ ದೊರೆತಿವೆ.

ಕೊರೊನಾ ಲಾಕ್ ಡೌನ್ ಹಿನ್ನಲೆ  ಚೆನ್ನೈ ನಿವಾಸದಲ್ಲಿ ನೆಲೆಸಿರುವ ಅವರು ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಳಯರಾಜರವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.