ಗುಜರಾತ್: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ 6.30ರ ಸುಮಾರಿಗೆ ಬೊಟಾಡ್ ಜಿಲ್ಲೆಯಲ್ಲಿ ನಡೆದಿದೆ.
42 ವರ್ಷದ ವ್ಯಕ್ತಿ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟಿದ್ದಾರೆ. ಮೃತರನ್ನು ಮಂಗಾಭಾಯಿ ವಿಜುದಾ, ಅವರ ಪುತ್ರಿಯರಾದ ಸೋನಂ (17), ರೇಖಾ (21) ಮತ್ತು ಮಗ ಜಿಗ್ನೇಶ್ (19) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೋಟಾಡ್‌ನ ಗಧಾಡಾ ತಾಲೂಕಿನ ನಾನಾ ಸಖ್‌ಪರ್ ಗ್ರಾಮದವರಾಗಿದ್ದಾರೆ.
ಪೊಲೀಸರ ಪ್ರಕಾರ, ಸಂಬಂಧಿಕರೊಂದಿಗೆ ಜಗಳವಾಡಿ ಕೊಲೆ ಯತ್ನ ನಡೆಸಿದ್ದರು, ಬಳಿಕ ಕೊಲೆ ಯತ್ನದ ಆರೋಪದ ಮೇಲೆ ವಿಜುದಾ ಬಂಧನಕ್ಕೊಳಗಾಗಿದ್ದರು, ಆಮೇಲೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ನಾಲ್ವರು ಭಾವನಗರದಿಂದ ಗಾಂಧಿಧಾಮ್ಗೆ ಹೋಗುತ್ತಿದ್ದ ರೈಲಿನ ಮುಂದೆ ಹಾರಿದ್ದಾರೆ. ಹಳಿಗಳ ಉದ್ದಕ್ಕೂ ನಾಲ್ವರ ಶವಗಳು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.










