ಗುಜರಾತ್‍ನ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢ-ಮುಖ್ಯಮಂತ್ರಿಗೆ ಆತಂಕ…

213
firstsuddi

ಅಹಮದಾಬಾದ್ : ಗುಜರಾತ್‍ನ ಜಮಾಲ್ ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ, ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗೂ ಆತಂಕ ಹೆಚ್ಚಾಗಿದೆ. ಗುಜರಾತ್‍ನ ಜಮಾಲ್ ಪುರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಇದರಿಂದ ಶಾಸಕ ಇಮ್ರಾನ್ ಖೇದವಾಲ ಅವರು ಜನಸಾಮಾನ್ಯರನ್ನು ಭೇಟಿಯಾಗಿ ಸಹಾಯ ಮಾಡಿದ್ದರು. ಅಲ್ಲದೇ ಕೊರೊನಾ ಸೋಂಕು ದೃಢಪಡುವುದಕ್ಕೂ ಮುನ್ನ ಗುಜರಾತ್‍ನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಸೋಂಕಿತ ಶಾಸಕ ಇಮ್ರಾನ್ ಖೇದವಾಲ ಅವರು ಸಿಎಂ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಬಾಯ್ ಪಟೇಲ್ ಹಾಗೂ ಗೃಹ ಸಚಿವ ಪ್ರದೀಪ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿರುವುದರಿಂದ ಅವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಇಡುವ ಸಾಧ್ಯತೆ ಇದೆ. ಸದ್ಯ ಶಾಸಕ ಇಮ್ರಾನ್ ಖೇದವಾಲ ಅವರನ್ನು ಎಸ್‍ವಿಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.