ಗೆಳತಿ ಜೊತೆ ಸಪ್ತಪದಿ ತುಳಿದ ದೀಪಕ್ ಚಹರ್.

88
firstsuddi

ಆಗ್ರಾ( ಉತ್ತರ ಪ್ರದೇಶ): ಟೀಂ ಇಂಡಿಯಾ ಕ್ರಿಕೆಟರ್ ದೀಪಕ್ ಚಹರ್ ಇಂದು ತಮ್ಮ ಗೆಳತಿ ಜಯಾ ಭಾರದ್ವಾಜ್ ಜೊತೆ ಸಪ್ತಪದಿ ತುಳಿದಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಮದುವೆ ಸಮಾರಂಭದ ಕೆಲವೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ಸಲ ನಿಮ್ಮನ್ನು ಭೇಟಿಯಾದ ಕ್ಷಣ ನನಗೆ ಸರಿಯಾದ ವ್ಯಕ್ತಿ ನೀವೊಬ್ಬರೇ ಎಂದೆನಿಸಿತು. ನಮ್ಮ ಜೀವನದಲ್ಲಿ ನಾವು ಜೊತೆಯಾಗಿ ಸಾಕಷ್ಟು ಆನಂದಿಸಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿಯೂ ಇದನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆ ಎಂದು ನಿಮ್ಮ ಬಳಿ ಪ್ರಮಾಣ ಮಾಡುತ್ತೇನೆ. ಇದು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣ. ದಯವಿಟ್ಟು ಪ್ರತಿಯೊಬ್ಬರೂ ನಮ್ಮನ್ನು ಆಶೀರ್ವದಿಸಿ ಎಂದು ದೀಪಕ್ ಚಹರ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು. ದೀಪಕ್ ತಮ್ಮ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.