ಗೋಕರ್ಣಕ್ಕೆ ಬಂದಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆ…

57
firstsuddi

ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.

ಎಮಿ ಯಮಾಝಕಿ(40) ಕಾಣೆಯಾದ ಮಹಿಳೆ. ಫೆ.5ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್​ನಲ್ಲಿ ತನ್ನ ಪತಿಯ ಜೊತೆ ಮಹಿಳೆ ತಂಗಿದ್ದರು. ಮರುದಿನ ಮುಂಜಾನೆ 10.30ರ ಸಮಯಕ್ಕೆ ನೇಚರ್ ಕ್ಯಾಂಪಸ್ ನಿಂದ ಹೊರ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ.

ಈ ಕುರಿತು ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.