ಚರ್ಚ್ ಗೆ ನುಗ್ಗಿದ ಕಳ್ಳರು – ರೂ. 88,000 ನಗದಿನೊಂದಿಗೆ ಪರಾರಿ…

90
firstsuddi

ಉಡುಪಿ : ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಚರ್ಚ್ ಕಚೇರಿಯಲ್ಲಿದ್ದ ರೂ 88, 000 ನಗದು ದೋಚಿ ಪರಾರಿಯಾಗಿದ್ದಾರೆ.

ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ಚರ್ಚಿನ ಧರ್ಮಗುರುಗಳಾದ ವಂ|ವಿಕ್ಟರ್ ಫೆರ್ನಾಂಡಿಸ್ ಚರ್ಚಿನ ಕಚೇರಿ ಮತ್ತು ನಿರ್ಮಲ ಶಾಲೆಯ ಕಚೇರಿಗಳಿಗೆ ಬೀಗ ಹಾಕಿ ತಮ್ಮ ವಸತಿ ಗೃಹಕ್ಕೆ ತೆರಳಿದ್ದರು. ಆದರೆ ಇಂದು ಬೆಳಿಗ್ಗೆ ಬಂದು ನೋಡುವಾಗ ಕಳ್ಳರು ಚರ್ಚ್ ಕಚೇರಿಯ ಎದುರಿನ ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿ ಮೇಜಿನ ಡ್ರಾವರ್ ಮೇಲೆ ಇಟ್ಟಿದ್ದ ಬೀಗದ ಕೀಯನ್ನು ಬಳಸಿ ಡ್ರಾವರಿನಲ್ಲಿದ್ದ ಸುಮಾರು ರೂ. 88.000 ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.