ಬೆಂಗಳೂರು : ಚಾಕುವಿನಿಂದ ಇರಿದು ಅಳಿಯ ಅತ್ತೆಯನ್ನೇ ಕೊಲೆಗೈದಿರುವ ಘಟನೆ ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ.
ಏಳಲ್ ಅರಸಿ (48) ಕೊಲೆಯಾದ ಮಹಿಳೆ. ಆರೋಪಿ ದಿವಾಕರ ಅತ್ತೆಯನ್ನು ಕೊಲೆಗೈದಿದ್ದು, ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದೆ.
ದಿವಾಕರನ ಹೆಂಡತಿ ತನ್ನ ಮಗುವಿನೊಂದಿಗೆ ತವರು ಮನೆಗೆ ಬಂದಿದ್ದಳು. ಆದರೆ ದಿವಾಕರ ಯಾರಿಗೂ ತಿಳಿಯದಂತೆ ಬಂದು ಮಗುವನ್ನು ಕರೆದುಕೊಂಡು ಹೋಗಿದ್ದ. ಮಗು ಕಾಣಸದೆ ಕಂಗಾಲಾದ ಏಳಲ್ ಅರಸಿ ಹಾಗೂ ಆಕೆಯ ಮಗಳು ಮಗುವನ್ನು ಹುಡುಕಾಡಿದ್ದಾರೆ.
ಇತ್ತ ಮಗು ದಿವಾಕರನ ಬಳಿ ಇರುವುದನ್ನು ತಿಳಿದು ವಾಪಸ್ ಕಳಿಸುವಂತೆ ಕೇಳಿಕೊಂಡಿದ್ದರು. ಆದರೆ ದಿವಾಕರ ಮಗುವನ್ನು ವಾಪಸ್ ಕಳಿಸಲು ಒಪ್ಪದೆ ಗಲಾಟೆ ಮಾಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.










