ಚಿಕ್ಕಮಗಳೂರು : ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಯಲದಲ್ಲಿ ಶ್ರಿ ರಾಮಾನುಜಾಚಾರ್ಯರ ಜನ್ಮದಿನ ಸರಳವಾಗಿ ಆಚರಣೆ…

285
firstsuddi

ಚಿಕ್ಕಮಗಳೂರು : ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ವಿಶಿಷ್ಠಾದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರಿ ರಾಮಾನುಜಾಚಾರ್ಯರ ಜನ್ಮದಿನವನ್ನು ಇಲ್ಲಿನ ಹಿರೇಮಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಯಲದಲ್ಲಿ ಸರಳವಾಗಿ ಆಚರಿಸಲಾಯಿತು.
ಜಯಂತಿ ಪ್ರಯುಕ್ತ ಬೆಳಿಗ್ಗೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ದೇವಾಲಯದಲ್ಲಿ ವೇದಪಾರಾಯಣ, ಪ್ರಬಂಧ ಪಾರಾಯಣ, ತಮಿಳು ಪದ್ಯಗಳ ವಾಚನ, ಶ್ರಿ ರಾಮಾನುಜಾಚಾರ್ಯರ ವಿಗ್ರಹಕ್ಕೆ ಅಭಿಷೇಕ ವಿಶೇಷ ಪೂಜೆ ಅಲಂಕಾರ ನಡೆಯಿತು.
ಸಂಪ್ರದಾಯದಂತೆ ಜಯಂತಿ ಅಂಗವಾಗಿ ಪ್ರತಿವರ್ಷ ನಡೆಸಲಾಗುತ್ತಿದ್ದ ಪ್ರಾಕಾರೋತ್ಸವ, ಪ್ರಬಂಧಗೋಷ್ಠಿ, ಆಂಡಾಳ್‍ಗೋಷ್ಠಿಯನ್ನು ಈ ಬಾರಿ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಕೈಬಿಡಲಾಯಿತು.
ಇದೇ ವೇಳೆ ಕೊರೊನಾ ವೈರಸ್ ನಿವಾರಣೆಯಾಗಲಿ ಆಚಾರ್ಯರ ಕೃಪೆ ಎಲ್ಲರ ಮೇಲಿರಲಿ ಎಂದು ಕನ್ನಡ ರಾಮನ ಸನ್ನಿಧಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ಜಯಂತಿ ಅಂಗವಾಗಿ ಹೆಬ್ಬಾರ್ ಶ್ರೀ ವೈಷ್ಣವ ಉಪಸಭಾದಿಂದ ನಗರದ ವಿವಿಧೆಡೆ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಅಳಸಿಂಗ ವೇದಿಕೆಯ ಅಧ್ಯಕ್ಷ ಎಂ.ಎನ್.ರಂಗನಾಥನ್, ಡಿ.ಎಲ್. ರಾಮಾನುಜಂ, ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಎ.ಎನ್.ಮೂರ್ತಿ, ಬಾಲಾಜಿ, ನಾಗರಾಜ್ ಹಾಜರಿದ್ದರು.