ಚಿಕ್ಕಮಗಳೂರು : ಕಾಂಗ್ರೆಸ್‍ಗೆ ಸಚಿವ ಸಿ.ಟಿ. ರವಿ ಟಾಂಗ್…

282
firstsuddi

ಚಿಕ್ಕಮಗಳೂರು : ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಹಿನ್ನೆಲೆ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ. ರವಿ ಅವರು ಇನ್ನೂ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿಲ್ಲ. ಅದು ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ನಾವು ನಾಮಪತ್ರ ಹಾಕುವ ಮುಂಚೆ ಅಭ್ಯರ್ಥಿಯನ್ನು ಘೊಷಣೆ ಮಾಡುತ್ತೇವೆ. ನಾವು ಅಭ್ಯರ್ಥಿಗಳ ಆಧಾರದ ಮೇಲೆ ಚುನಾವಣೆ ಮಾಡುವುದಿಲ್ಲ. ನಮ್ಮದು ಕೇಡರ್ ಬೇಸ್‍ಡ್ ಪಾರ್ಟಿ ಸಂಘಟನೆ ಮೇಲೆ ಚುನಾವಣೆ ನಡೆಯುತ್ತೆ. ಅಭ್ಯರ್ಥಿ ಅದಕ್ಕೆ ಸಹಾಯಕ ಆಗುತ್ತಾನೆ ಅಷ್ಟೇ. ಕಾಂಗ್ರೆಸ್‍ನವರ ಹಾಗೆ ಅಭ್ಯರ್ಥಿಗಳನ್ನು ನೆಚ್ಚಿಕೊಂಡು ಚುನಾವಣೆ ಮಾಡಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಎಲ್ಲವನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ಇರುತ್ತದೆ ಎಂದು ಸಚಿವ ಸಿ.ಟಿ. ರವಿ ಅವರು ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.