ಚಿಕ್ಕಮಗಳೂರು : ಪ್ರಧಾನಿ ಮೋದಿ ಅವರಿಂದ ಜನತಾ ಕರ್ಫ್ಯೂ ಕರೆ ಹಿನ್ನಲೆ, ಶೃಂಗೇರಿಯಲ್ಲಿ ನಿಗದಿಯಾಗಿದ್ದ ಹೊರೆಕಾಣಿಕೆ ಸಮರ್ಪಣೆ ಮುಂದೂಡಿಕೆ…

622
firstsuddi

ಚಿಕ್ಕಮಗಳೂರು : ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಜನತಾ ಕರ್ಫ್ಯೂ ಕರೆ ಹಿನ್ನಲೆ, ಶೃಂಗೇರಿಯಲ್ಲಿ ನಿಗದಿಯಾಗಿದ್ದ ಹೊರೆಕಾಣಿಕೆ ಸಮರ್ಪಣೆ ಮುಂದೂಡಿಕೆಯಾಗಿದೆ. ಭಾರತೀ ತೀರ್ಥ ಶ್ರೀಗಳ 70 ನೇ ವರ್ಧುಂತ್ಸುತ್ಸವ ಅಂಗವಾಗಿ ಮಾರ್ಚ್ 22ರಂದು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಶೃಂಗೇರಿ ಶಾರದಾಪೀಠದ ವಸತಿ ಗೃಹಗಳು ಬಂದ್ ಆಗಲಿದೆ. ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯು ಇರುವುದಿಲ್ಲ ಎಂದು ಮಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು ತಿಳಿಸಿದ್ದಾರೆ.