ಚಿಕ್ಕಮಗಳೂರು : ಬದುಕಿರುವ ಮಗುವನ್ನು ಮೃತಪಟ್ಟಿದೆ ಎಂದ ಹಾಸನದ ಖಾಸಗಿ ಆಸ್ಪತ್ರೆಯ ವೈದ್ಯರ ಬಗ್ಗೆ ಪೋಷಕರ ಆಕ್ರೋಶ…

353
firstsuddi

ಚಿಕ್ಕಮಗಳೂರು : ಬದುಕಿದ್ದ ಮಗುವನ್ನು ಮೃತಪಟ್ಟಿದೆ ಎಂದು ವೈದ್ಯರು ಪೋಷಕರಿಗೆ ಮಗುವನ್ನು ಒಪ್ಪಿಸಿರುವ ಘಟನೆ ಹಾಸನದ ಮಣಿ ಆಸ್ಪತ್ರೆಯಲ್ಲಿ ನಡೆದಿದೆ. ತಾಲ್ಲೂಕಿನ ಹಳಿಯೂರು ಗ್ರಾಮದ ಲೋಕೇಶ್ ಮತ್ತು ಸರಿತಾ ಅವರು 4ತಿಂಗಳ ಮಗುವನ್ನು ಉಸಿರಾಟದ ತೊಂದರೆಯಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದ್ದು, ಆದರೆ ವೈದ್ಯರು ಮಗು ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪ್ಪಿದೆ ಎಂದು ವಾಪಸ್ ಕಳುಹಿಸಿದ್ದು, ಹಾಸನದಿಂದ ಆಲ್ದೂರಿಗೆ ಬರುವ ವೇಳೆ ಮಗು ಅತ್ತಿದ್ದು, ತಕ್ಷಣವೇ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕರೆತಂದಿದ್ದು, ಪರೀಕ್ಷಿಸಿದ ವೈದ್ಯರು ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಮಕ್ಕಳ ತಜ್ಞರು ಇಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಣಿ ಆಸ್ಪತ್ರೆಯ ವಿರುದ್ಧ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.