ಚಿಕ್ಕಮಗಳೂರು : ಬಹುತೇಕ ವಾರ್ಡ್‍ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ : ರಂಜನ್ ಅಜಿತ್‍ಕುಮಾರ್.

207
firstsuddi

ಚಿಕ್ಕಮಗಳೂರು : ಬಹುತೇಕ ವಾರ್ಡ್‍ಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು ಸಾರ್ವಜನಿಕರು ಸಹ ಪಕ್ಷದ ಅಭ್ಯರ್ಥಿಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಹೇಳಿದರು.

ನಗರದ ಗೌರಿಕಾಲುವೆ 32ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಅಂಜುಂ ಇರ್ಷಾದ್ ಅವರ ಪರ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಇಂದು ಪಾಲ್ಗೊಂಡು ಅವರು ಮಾತನಾಡಿದರು.

ಎರಡು ರಾಷ್ಟ್ರೀಯ ಪಕ್ಷಗಳು ನಗರದ ವಾರ್ಡ್‍ಗಳ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದು ಸ್ಥಳೀಯರಿಗೆ ತೀವ್ರ ಅಸಮಾಧಾನ ತಂದಿದೆ. ಆ ಉದ್ದೇಶದಿಂದ ಈ ಬಾರಿ ನಿವಾಸಿಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಚುನಾವಣಾ ಕಣದಲ್ಲಿ ಜಯಶೀಲರಾಗಿ ಮಾಡಿ ವಾರ್ಡ್‍ನ ಅಭಿವೃದ್ದಿಗೆ ಶ್ರಮಿಸಲು ಮುಂದಾಗಬೇಕು ಎಂದರು.

ವಾರ್ಡಿನ ಪಕ್ಷದ ಅಭ್ಯರ್ಥಿ ಯುವಮುಂದಾಳಾಗಿ ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಇದೇ ವಾರ್ಡಿನ ನಿವಾಸಿಯಾಗಿರುವುದರಿಂದ ಸುತ್ತಮುತ್ತಲಿನ ಸಮಸ್ಯೆಗಳ ಅರಿವು ಅವರಿಗಿದೆ. ಮುಂದೆ ಅತ್ಯಧಿಕ ಮತಗಳ ಅಂತರದಲ್ಲಿ ಜಯಶೀಲರಾಗಿ ವಾರ್ಡ್ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯಿದೆ ಎಂದರು.

ಮುಂದಿನ ದಿನಗಳಲ್ಲಿ ವಾರ್ಡ್‍ಗಳ ಯಾವ ಭಾಗದಲ್ಲಿ ಅಭಿವೃದ್ದಿ ಕಾಮಗಾರಿಗಳು ಕುಂಠಿತವಾಗಿವೆ ಅಲ್ಲಲ್ಲಿ ತೆರಳಿ ಪರಿಶೀಲಿಸುವ ಮೂಲಕ ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಮಾಜಿ ಹೆಚ್.ಎಸ್.ಮಂಜಪ್ಪ ಮಾತನಾಡಿ ವಾರ್ಡ್‍ನ ಕೆಲವು ಭಾಗಗಳಲ್ಲಿ ಇರುವ ಸಮಸ್ಯೆಗಳು ಪಕ್ಷದ ಅಭ್ಯರ್ಥಿಗೆ ಮೊದಲಿನಿಂದಲೂ ಅರಿವಿದ್ದು ಈ ಬಾರಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ನಾಸೀರ್, ಅಸ್ಲಾಂ, ಅರ್ಮಾನ್, ಸುಬಾನ್ ಮತ್ತಿತರರು ಹಾಜರಿದ್ದರು.