ಚಿಕ್ಕಮಗಳೂರು : ಭಾರೀ ಮಳೆ-ಗಾಳಿಗೆ ಮರ ಬಿದ್ದು 2 ಹಸುಗಳು ಸಾವು…

390
firstsuddi

ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರಿ ಗಾಳಿ ಮಳೆಗೆ ಮರ ಬಿದ್ದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಆಲ್ದೂರಿನಲ್ಲಿ ನಡೆದಿದೆ. ತಿಮ್ಮೇಗೌಡ ಎಂಬುವವರಿಗೆ ಸೇರಿದ ಹಸುಗಳು ಎನ್ನಲಾಗಿದ್ದು, ಮರ ಬಿದ್ದ ಕೂಡಲೇ ಸ್ಥಳದಲ್ಲೇ ಹಸುಗಳು ಪ್ರಾಣಬಿಟ್ಟಿದೆ. ಭಾರಿ ಗಾಳಿ ಮಳೆಯಿಂದಾಗಿ ಜಾನುವಾರುಗಳು ಹಾಗೂ ಜನರು ಕಂಗಾಲಾಗಿದ್ದಾರೆ.