ಚಿಕ್ಕಮಗಳೂರು : ಮಳೆಗಾಗಿ ನಾಳೆ ವಿಶೇಷ ಪೂಜೆ ಹಿನ್ನೆಲೆ ಶೃಂಗೇರಿಗೆ ಬಂದ ಡಿ.ಕೆ.ಶಿವಕುಮಾರ್…

208

ಚಿಕ್ಕಮಗಳೂರು : ಮಳೆಗಾಗಿ ವಿಶೇಷ ಪೂಜೆ ಹಿನ್ನೆಲೆ ಶೃಂಗೇರಿ ದೇವಾಲಯಕ್ಕೆ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದ್ದು ಶಾರದಾಂಬೆ ದರ್ಶನ ಪಡೆದು ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಹಾದ ಋಷ್ಯಶೃಂಗನಿಗೆ ನಾಳೆ    ನಡೆಯಲಿರುವ ಪರ್ಜನ್ಯ ಹೋಮದಲ್ಲಿ ಭಾಗಿಯಾಗಲಿದ್ದು.ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಅವರು ಋಷ್ಯಶೃಂಗ ದೇವಾಲಯದಲ್ಲಿ ಹರಕೆ ಹೊತ್ತುಕೊಂಡು ಬಳಿಕ  ನಾಡಿನಲ್ಲಿ ಸಮೃದ್ಧ ಮಳೆಯಾಗಿದ್ದು. ಮಳೆಯಾದ ಮೇಲೆ ಬಂದು ಹರಕೆ ತೀರಿಸಿದ್ದರು. ಇಂದು ರಾತ್ರಿ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿರುವ ಡಿ.ಕೆ.ಶಿವಕುಮಾರ್ ಅವರು ನಾಳೆ ಬೆಳಗ್ಗೆ  5:30 ರಿಂದ ನಡೆಯಲಿರುವ ಪೂಜೆಗೆ ಪಿ.ಟಿ. ಪರಮೇಶ್ವರ ನಾಯ್ಕ್ ಹಾಗೂ ಶೃಂಗೇರಿ ಶಾಸಕರಾದ ಟಿ.ಡಿ. ರಾಜೇಗೌಡ ಅವರು  ಸಾಥ್ ನೀಡಲಿದ್ದಾರೆ