ಚಿಕ್ಕಮಗಳೂರು : ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಫೈರೋಜ್ ಅಹಮದ್ ಅವಿರೋಧ ಆಯ್ಕೆ

429
firstsuddi

ಚಿಕ್ಕಮಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದ್ದು, ಪ್ರಥಮ ಅಧ್ಯಕ್ಷರಾಗಿ ಫೈರೋಜ್ ಅಹಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಫಯೀಜ್ ಅಹಮದ್, ಉಪಾಧ್ಯಕ್ಷರಾಗಿ ಅಫ್ತಾಬ್ ಹುಸೇನ್, ಸುಹಾನ ಸುಲ್ತಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಗರ್ ಆಲಿಖಾನ್, ಖಜಾಂಚಿಯಾಗಿ ಜಾಕೀರ್ ಹುಸೇನ್, ಜಂಟಿ ಕಾರ್ಯದರ್ಶಿಯಾಗಿ ಸೈಯದ್ ತಾರೀಕ್ ಅಲಿ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಯಾಗಿ ಅಫ್ತಾಬ್ ಅಹಮದ್, ಯೂನೂಸ್ ಭಾಷಾ, ಸಹ ಸಂಚಾಲಕರಾಗಿ ಮಹಮದ್ ಇಸ್ಮಾಯಿಲ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಫರೀದಾ ಬೇಗಂ, ಕ್ರೀಡಾ ಕಾರ್ಯದರ್ಶಿಯಾಗಿ ಇಲಿಯಾಜ್ ಅಹಮದ್ ಆಯ್ಕೆಯಾಗಿದ್ದಾರೆ.
ನಗರದ ಅಲ್ ಅಮೀನ್ ಸರ್ಕಾರಿ ಶಾಲೆಯಲ್ಲಿ ಉರ್ದು ಶಿಕ್ಷಣ ಸಂಯೋಜಕಿ ಸಬೀಹ ಅಖ್ತರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಸಂಘದ ರಾಜ್ಯಾಧ್ಯಕ್ಷ ಸಲೀಂ ಹಂಚಿಮನಿ, ಮಖಾಂದರ್ ಉಪಸ್ಥಿತರಿದ್ದರು.