ಚಿಕ್ಕಮಗಳೂರು: ಶ್ರೀ ಶಿವಕುಮಾರ ಸ್ವಾಮಿಗಳು ಜಾತಿ ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಬದುಕನ್ನು ಕಟ್ಟಿಕೊಟ್ಟ ಮಹಾನ್ ಶಕ್ತಿ – ರಮೇಶ್ ನಾರಿನಿಂಗಜ್ಜಿ

366
FIRSTSUDDI

ಚಿಕ್ಕಮಗಳೂರು – ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಲ್ಲಿನ ಗೃಹಮಂಡಳಿ ವಿಕಾಸ ನಗರ ಬಡಾವಣೆಯ ನಿವಾಸಿಗಳು ಭಾನುವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಬಡಾವಣೆಯ ಮುಖ್ಯರಸ್ತೆಯಲ್ಲಿ ಶ್ರೀಗಳ ಭಾವಚಿತ್ರವನ್ನಿಟ್ಟು ಸಾಮೂಹಿಕವಾಗಿ ಪೂಜೆ, ಪುಷ್ಪ ನಮನ ಮತ್ತು ನುಡಿನಮನ ಸಲ್ಲಿಸಿದ ನಿವಾಸಿಗಳು ಬೆಳಗಿನಿಂದ ಮಧ್ಯಾಹ್ನದವರೆಗೆ ಅಖಂಡ ಭಜನೆ ನಡೆಸಿದರು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೈಲಿಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಉಮಾಮಹೇಶ್ವರ ಶ್ರೀಗಳು ಹಾಕಿಕೊಟ್ಟಿರುವ ಹಾದಿಯಲ್ಲಿ ಎಲ್ಲರೂ ಸಾಗಬೇಕು ಎಂದು ಸಲಹೆ ಮಾಡಿದರು.
ಉಪನ್ಯಾಸಕ ಹಾಲಪ್ಪ ಮಾತನಾಡಿ ಶಿವಕುಮಾರ ಶ್ರೀಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಪತ್ರಕರ್ತ ರಮೇಶ್ ನಾರಿನಿಂಗಜ್ಜಿ ಮಾತನಾಡಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಜಾತಿ ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರಿಗೂ ಬದುಕನ್ನು ಕಟ್ಟಿಕೊಟ್ಟ ಮಹಾನ್ ಶಕ್ತಿ ಎಂದು ಹೇಳಿದರು.
ಶ್ರದ್ದಾಂಜಲಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಮಾಜಿ ಯೋಧ ಸುರೇಶ್, ಶಿಕ್ಷಕ ಶಿವನಂಜಪ್ಪ, ಶಂಕರಪ್ಪ, ಗುಬ್ಬಿಹಳ್ಳಿ ಸೋಮಣ್ಣ, ಕರಿಸಿದ್ದಯ್ಯ, ಯೋಗಶಿಕ್ಷಕಿ ಮಂಜುಳಾ ಹಾಜರಿದ್ದರು.