ಚಿಕ್ಕಮಗಳೂರು : ಸಂಭ್ರಮದಿಂದ ಅಂಬೇಡ್ಕರ್ ಜನ್ಮದಿನ ಆಚರಣೆ…

49
firstsuddi

ಚಿಕ್ಕಮಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ಭಾರತ ಸೇವಾದಳದ ಪದಾಧಿಕಾರಿಗಳು ಮತ್ತು ಸದಸ್ಯರು ನಗರದಲ್ಲಿ ನಿನ್ನೆ ಸಂಭ್ರಮದಿಂದ ಆಚರಿಸಿದರು.

ಭಾರತ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ನಡೆದ ಜಯಂತಿ ಕಾರ್ಯಕ್ರಮವನ್ನು ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಉದ್ಘಾಟಿಸಿದರು.

ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಸೇವಾದಳದ ಪದಾಧಿಕಾರಿಗಳು ಮತ್ತು ಸದಸ್ಯರು ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಮೂರು ದಶಕಕ್ಕೂ ಅಧಿಕ ಕಾಲ ಭಾರತ ಸೇವಾದಳದಲ್ಲಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶಿಕ್ಷಕ ಬಸವರಾಜ್ ಮಾತನಾಡಿ, ಅಲ್ಲಂಪುರ ಶಾಲೆ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಾಗಿದ್ದಕ್ಕೆ ಮೂಲ ಕಾರಣ ಲೋಕೇಶ್ವರಾಚಾರ್ ಅವರ ಪರಿಶ್ರಮ ಮತ್ತು ಕಾಳಜಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಲೋಕೇಶ್ವರಾಚಾರ್,ತಾವು ಶಿಕ್ಷಕರಾಗಿ ಯಶಸ್ವಿಯಾಗುವುದಕ್ಕೆ ಮೂಲ ಕಾರಣ ಭಾರತ ಸೇವಾದಳದಲ್ಲಿನ ಕಲಿಕೆ ಎಂದು ಹೇಳಿದರು.