ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ : ನಿರಾಣಿ

57
firstsuddi

ಬೆಂಗಳೂರು : 2022ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಎಲ್ಲ ಒಡಂಬಡಿಕೆ ಕುರಿತು 90 ದಿನದಲ್ಲಿ ಆ ಎಲ್ಲಾ ಕಡತ ವಿಲೇವಾರಿ ಮಾಡಲಿದ್ದೇವೆ. ಸಾಧಕ, ಬಾಧಕ ನೋಡಿ, ಯಾವ ಜಿಲ್ಲೆಗೆ ಅನುಮತಿ ಕೊಡಬೇಕು ಎಂದು ನಿರ್ಧರಿಸಲಾಗುತ್ತದೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಯುಬಿ ವೆಂಕಟೇಶ್, ನಾಗರಾಜ್ ಯಾದವ್, ಮಂಜುನಾಥ್ ಭಂಡಾರಿ ಅವರು ಜಾಗತಿಕ ಬಂಡವಾಳ ಸಮಾವೇಶದ ಕುರಿತು ಪ್ರಶ್ನೆ ಕೇಳಿದರು. ಬಂಡವಾಳ ಹೂಡಿಕೆ ಸಮಾವೇಶದಿಂದ ಯಾವುದೇ ಅನುಕೂಲ ಆಗುತ್ತಿಲ್ಲ. ಸಮಾವೇಶ ಮಾಡಲು 75 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಜಿಮ್ ನ ಬಂಡವಾಳದಲ್ಲಿ 14% ಮಾತ್ರ ಬಂಡವಾಳ ಬಂದಿದೆ. ಹಾಗಾದ್ರೆ ಈ ಬಂಡವಾಳ ಹೂಡಿಕೆ ಸಮಾವೇಶದ ಲಾಭವೇನು. ಸುಮ್ಮನೆ ಸಮಾವೇಶಕ್ಕೆ ಹಣ ಖರ್ಚಾಗಿದೆ ಅಷ್ಟೆ. ಸರ್ಕಾರ ಹೇಳಿದ ಹಾಗೆ ಉದ್ಯೋಗ ಸೃಷ್ಟಿ ಆಗಲ್ಲ ಎಂದು ಕಿಡಿಕಾರಿದರು.

ಇದಕ್ಕೆ ಉತ್ತರಿಸಿದ ಸಚಿವ ನಿರಾಣಿ ನವೆಂಬರ್ ನಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 9,81,784 ಕೋಟಿ ಹೂಡಿಕೆ ಆಗಿದೆ. 2012ರಲ್ಲಿ ನಮಗೆ 1 ಸಾವಿರ ಎಕರೆ ಟಾಟಾಗೆ ಅವರಿಗೆ ಕೊಡಲು ಆಗದೇ ಟಾಟಾ ಗುಜರಾತ್ ಗೆ ಹೋಯ್ತು. 2012ರಲ್ಲಿ 1 ಲಕ್ಷ ಎಕರೆ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡೆವು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ನಾವು ವಶಪಡಿಸಿಕೊಂಡಿಸಿದ್ದ 1 ಲಕ್ಷ ಎಕರೆಯನ್ನು ಡೀನೋಟಿಫೈ ಮಾಡಿದರು. ಇದರಿಂದ ಭೂಮಿ ನಮಗೆ ಸಮಸ್ಯೆ ಆಯ್ತು ಎಂದರು.

2012ರಲ್ಲಿ ಸುಮಾರು 2 ಸಾವಿರ ಕೋಟಿ ಬಂಡವಾಳ ಇನ್ವೆಸ್ಟ್ ಆಗಿತ್ತು. ಅದರ ಬಡ್ಡಿಯಲ್ಲಿ ನಾವು ಸಮಾವೇಶ ಮಾಡಿದ್ದೇವೆ. ಈ ಬಾರಿಯ ಸಮಾವೇಶದಿಂದ 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 75% ಬಂಡವಾಳ ಹೂಡಿಕೆ ಆಗೋಕೆ ಸರ್ಕಾರ ಕ್ರಮವಹಿಸಲಾಗಿದೆ ಎಂದು ಹೇಳಿದರು.