ಬೆಂಗಳೂರು: ಜಾತಿ ನಿಂದನೆ ಜೊತೆ ಜೀವ ಬೆದರಿಕೆ ಆರೋಪ ಹೊತ್ತ ಶಾಸಕ ಮುನಿರತ್ನ ಜೈಲುಪಾಲಾಗಿದ್ದಾರೆ. ಮಹಿಳೆಯ ಬಗ್ಗೆ ಅವಾಚ್ಯ ಪದ ಬಳಸಿದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಸೇರಿದ್ದಾರೆ. ಮುನಿರತ್ನ ಜೈಲು ಸೇರ್ತಿದ್ದಂತೆ ಬಿಜೆಪಿ ಪಡೆಯ ಸಿಟ್ಟು ಭುಗಿಲೆದ್ದಿದೆ. ಕಾಂಗ್ರೆಸ್‍ನವ್ರು ಮಾತ್ರ ನಮಗೂ ಈ ಕೇಸ್‍ಗೂ ಸಂಬಂಧವಿಲ್ಲ ಅಂತಾನೇ ಸಿಟ್ಟು ಹೊರಹಾಕಿದ್ದಾರೆ.
ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಮುನಿರತ್ನ ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋ ಈಗಾಗಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ಇದೇ ಕಾರಣಕ್ಕಾಗಿ ಈಗ ಬೆಂಗಳೂರಿನ ರಾಜರಾಜೇಶ್ವರಿಯ ಬಿಜೆಪಿ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೋಲಾರದ ಗಡಿಯಲ್ಲಿ ಅರೆಸ್ಟ್ ಮಾಡಿ ತಂದು ಮೂರು ದಿನ ವಿಚಾರಣೆ ನಡೆಸಿದರೂ ಪೋಲಿಸರಿಗೆ ಒಂದೂ ವಿವರಣೆ ಸಿಗ್ತಿಲ್ಲ. ದೂರುದಾರ ಚಲುವರಾಜು ಉಲ್ಲೇಖಿಸಿರೋ ಯಾವೊಂದು ಅಂಶಕ್ಕೂ ಮುನಿರತ್ನರಿಂದ ಪೋಲಿಸರಿಗೆ ಉತ್ತರವೇ ಸಿಕ್ತಿಲ್ಲ. ಇದರ ನಡುವೆ ಪೋಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ಬೆಂಗಳೂರಿನ ಕೋರ್ಟ್‍ಗೆ ಹಾಜರುಪಡಿಸಲಾಗಿತ್ತು. ಶಾಸಕ ಮುನಿರತ್ನ ಪರ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ಆರೋಪಿ ಮುನಿರತ್ನಗೆ ಮಧ್ಯಂತರ ಜಾಮೀನು ಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಕೆಲ ಅಂಶಗಳನ್ನೂ ಕೊಟ್ಟರು. ತಿರುಪತಿಗೆ ಹೋಗುವಾಗ ಅರೆಸ್ಟ್ ಮಾಡಿದ್ದಾರೆ. ಶಾಸಕರಾಗಿರುವ ಮುನಿರತ್ನ ಅವರ ವಿಚಾರಣೆಗೆ ನೊಟೀಸ್ ಕೂಡಾ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ಅದೇಶದ ಪ್ರಕಾರ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಕೊಡ್ಬೇಕು. ಆದರೆ ಈ ಪ್ರರಕರಣದಲ್ಲಿ ಪೋಲೀಸರು ತರಾತುರಿಯಲ್ಲಿ FIR ಹಾಕಿ ಅರೆಸ್ಟ್ ಮಾಡಿದ್ದಾರೆ ಎಂದು ವಾದಿಸಿದರು. ಅಲ್ಲದೆ ಸೆಕ್ಷನ್ 41A ಅಡಿ ನೊಟೀಸ್ ನೀಡದೆಯೇ ಅರೆಸ್ಟ್ ಕೂಡ ಮಾಡಿದ್ದಾರೆ.. ಹೀಗೆ ನೊಟೀಸ್ ಕೊಡದೆ ಅರೆಸ್ಟ್ ಮಾಡಿರೋದು ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು.
ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ ಮನವಿಗೆ ಸರ್ಕಾರದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಆಕ್ಷೇಪ ಎತ್ತಿದರು. ಮುನಿರತ್ನ ಅವರ ಜಾಮೀನು ಅರ್ಜಿಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆ ಹಾಕಬೇಕು. ಆಕ್ಷೇಪಣೆ ಸಲ್ಲಿಕೆ ಮಾಡಲು ನಮಗೆ ಟೈಂ ಕೊಡಿ. ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುತ್ತೇವೆ, ಹೀಗಾಗಿ ನಮಗೆ ಒಂದು ದಿನವಾದರೂ ಕಾಲಾವಕಾಶ ಬೇಕು ಎಂದು ವಾದಿಸಿದರು.
ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ ಮನವಿಗೆ ಸರ್ಕಾರದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಆಕ್ಷೇಪ ಎತ್ತಿದರು. ಮುನಿರತ್ನ ಅವರ ಜಾಮೀನು ಅರ್ಜಿಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆ ಹಾಕಬೇಕು. ಆಕ್ಷೇಪಣೆ ಸಲ್ಲಿಕೆ ಮಾಡಲು ನಮಗೆ ಟೈಂ ಕೊಡಿ. ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುತ್ತೇವೆ, ಹೀಗಾಗಿ ನಮಗೆ ಒಂದು ದಿನವಾದರೂ ಕಾಲಾವಕಾಶ ಬೇಕು ಎಂದು ವಾದಿಸಿದರು.
ಬಿಜೆಪಿ ಶಾಸಕ ಮುನಿರತ್ನ ಬಂಧನ ವಿಚಾರ ಸಹಜವಾಗೇ ರಾಜಕೀಯ ಸ್ವರೂಪ ಪಡೆದಿದೆ. ವಿಚಾರವನ್ನು ಜೀವಂತವಾಗಿಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಳ್ತಿರೋವಾಗಲೇ ಇದೊಂದು ದ್ವೇಷದ ರಾಜಕಾರಣ ಎಂದಿದೆ ಪ್ರತಿಪಕ್ಷ ಬಿಜೆಪಿ. ಮುನಿರತ್ನ ವಿಚಾರವಾಗಿ ಸಿಎಂ, ಸರ್ಕಾರದ ಮೇಲೆ ಒಕ್ಕಲಿಗ ನಾಯಕರು ಒತ್ತಡ ಹಾಕಿದ್ದಾರೆ. ಆದರೆ, ಪ್ರತಿಪಕ್ಷಗಳು ದೊಡ್ಡ ದೊಡ್ಡವರೂ ಸೈಲೆಂಟ್ ಆಗಿದ್ದಾರೆ. ಮೈತ್ರಿ ನಾಯಕರ ವಿರುದ್ಧದ ಟೀಕೆಗೆ ಇದೇ ಅಸ್ತ್ರವಾಗಿದ್ದು, ಅವಕಾಶ ಸಿಕ್ಕಾಗೆಲ್ಲಾ ಟಾಂಗ್ ಕೊಡ್ತಿದ್ದಾರೆ. ಆದರೆ, ಶಿಸ್ತು ಸಮಿತಿಯಿಂದ ನೊಟೀಸ್ ಕೊಟ್ಟು ಸುಮ್ಮನಾಗಿದೆ ಬಿಜೆಪಿ. ಇನ್ನು ಮುನಿರತ್ನ ಜಾತಿನಿಂದನೇ ವಿಚಾರವನ್ನೇ ಮುಂದಿನ ಎಲ್ಲಾ ಚುನಾವಣೆಗಳಿಗೂ ಬಳಸಿಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ, ಅಭಿವೃದ್ಧಿ ಬಿಟ್ಟು ಬರೀ ದ್ವೇಷದ ರಾಜಕಾರಣ ಎಂದು ಬಿಂಬಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.










