ಜೂನ್ 3ರಂದು ವಿಧಾನ ಪರಿಷತ್‍ನ 7 ಸ್ಥಾನಗಳಿಗೆ ಚುನಾವಣೆ…

42
firstsuddi

ಬೆಂಗಳೂರು : ಜೂನ್ 14ರಂದು ವಿಧಾನ ಪರಿಷತ್‍ನ ಹಲವು ಸ್ಥಾನಗಳು ತೆರವಾಗಲಿದ್ದು, ಜೂನ್ 3ರಂದು ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲಕ್ಷ್ಮಣ ಸಂಗಪ್ಪ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರಭದ್ರಪ್ಪ, ಹೆಚ್.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ, ನಾರಾಯಣ ಸ್ವಾಮಿ ಕೆ.ವಿ, ಲಹರ್ ಸಿಂಗ್ ಸಿರೋಯಾ ಜೂನ್ 14ರಂದು ವಿಧಾನಪರಿಷತ್ ನಿಂದ ನಿವೃತ್ತಿಯಾಗಲಿದ್ದಾರೆ.

ಮೇ 17ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ಮೇ 24 ಕೊನೆಯ ದಿನವಾಗಿರಲಿದೆ. ಮೇ 25 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂಪಡೆಯಲು ಮೇ 27 ಕೊನೆಯ ದಿನವಾಗಿದೆ. ಜೂನ್ 3ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ.