ಟಿವಿ ರಿಮೋಟ್​ಗಾಗಿ ಇಬ್ಬರು ಮಕ್ಕಳ ನಡುವೆ ಗಲಾಟೆ: ಸಿಟ್ಟಿಗೆದ್ದು ಕತ್ತರಿ ಎಸೆದ ತಂದೆ, ಹಿರಿಮಗ ಸಾವು…

55
firstsuddi

ಚಿತ್ರದುರ್ಗ: ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಇದರಿಂದ ಸಿಟ್ಟಿಗೆದ್ದ ತಂದೆ ಕತ್ತರಿ ಎಸೆದಿದ್ದರಿಂದ ಹಿರಿಯ ಮಗ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.

ಚಂದ್ರಶೇಖರ್ (16) ಮೃತ ಬಾಲಕ. ಚಂದ್ರಶೇಖರ್(16), ಸಹೋದರ ಪವನ್ (14) ಟಿವಿ ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣಬಾಬು, ಕೈಗೆ ಸಿಕ್ಕ ಕತ್ತರಿ ಎಸೆದಿದ್ದಾನೆ. ಅದು ನೇರವಾಗಿ ಹೋಗಿ ಹಿರಿಮಗ ಚಂದ್ರಶೇಖರ್​ನ ಕುತ್ತಿಗೆಗೆ ತಗುಲಿ ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಲಕ್ಷ್ಮಣಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.