ಟಿವಿಎಸ್ ಗಾಡಿಗೆ ಜೆಸಿಬಿ ಡಿಕ್ಕಿ-ಯುವತಿ ಸ್ಥಳದಲ್ಲೇ ಸಾವು…

909
firstsuddi

ರಾಮನಗರ : ಸ್ಕೂಟಿಗೆ ಜೆಸಿಬಿ ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ತಾಲ್ಲೂಕಿನ ನಂಜಯ್ಯನ ಪಾಳ್ಯದ ನಿವಾಸಿ ಚೈತ್ರಾ(19) ಮೃತ ಯುವತಿ ಎಂದು ಗುರುತಿಸಲಾಗಿದ್ದು, ಮೃತ ಯುವತಿ ಇಂದು ಬೆಳಿಗ್ಗೆ ಯುವತಿ ಟಿವಿಎಸ್ ಗಾಡಿಯಲ್ಲಿ ಕರಲಮಂಗಲ ಗ್ರಾಮದಲ್ಲಿರುವ ಹಾಲಿನ ಡೈರಿಗೆ ಹಾಲನ್ನು ಹಾಕಲು ತೆರಳಿದ್ದರು. ಈ ವೇಳೆ ಯುವತಿ ಹೋಗುತ್ತಿದ್ದ ಗಾಡಿಗೆ ಜೆಸಿಬಿ ಡಿಕ್ಕಿ ಹೊಡೆದಿದ್ದು, ಜೆಸಿಬಿ ಡಿಕ್ಕಿ ಹೊಡೆದ ರಭಸಕ್ಕೆ ಯುವತಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮಾಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.