ಟೋಕಿಯೋ ಒಲಂಪಿಕ್ಸ್ : ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಭಾರತಕ್ಕೆ ಜಯ!

91
firstsuddi

ಟೋಕಿಯೋ(ಜಪಾನ್) : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡವು ಶುಭಾರಂಭ ಮಾಡಿದ್ದು, ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಪಂದ್ಯದ ಆರಂಭದಲ್ಲೇ ನ್ಯೂಜಿಲ್ಯಾಂಡ್ ನ ಕೇನ್ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಕಿವೀಸ್ ಮೊದಲ ಕ್ವಾಟರ್ ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಮೊದಲು ಸಿಕ್ಕ ಪೆನಾಲ್ಟಿ ಕಾರ್ನರ್ ವಿಫಲವಾಗಿದ್ದ ರೂಪಿಂದರ್ 10ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತದ ಗೋಲುಗಳ ಖಾತೆ ತೆರೆದರು. ಮೊದಲ ಭಾಗದಲ್ಲಿ 1-1 ಸಮಬಲವನ್ನು ಎರಡೂ ತಂಡಗಳು ಕಾಯ್ದುಕೊಂಡಿದ್ದವು.

ಎರಡನೇ ಕ್ವಾರ್ಟರ್ನಲ್ಲಿ 26ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಅನ್ನು ಗೋಲ್ ಬಾರಿಸಿ ಒಂದು ಗೋಲ್ ನ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಪ್ರಥಮಾರ್ಧದ ಅಂತ್ಯದ ವೇಳೆಗೆ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತ್ತು.

ತೃತೀಯಾರ್ಧದ ಆರಂಭದಲ್ಲೇ ಹರ್ಮನ್ ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತೀಯ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಕಿವೀಸ್ ಪಡೆ ಅನ್ನು 3-2 ಗೋಲುಗಳಿಂದ ಸೋಲಿಸಿದೆ. ನ್ಯೂಜಿಲೆಂಡ್ ನ ಸ್ಟೀವನ್ ಜೆನ್ನೀಸ್ ಗೋಲು ಬಾರಿಸಿದ್ದರಿಂದ ನ್ಯೂಜಿಲೆಂಡ್ ಎರಡು ಗೋಲು ಗಳಿಸಲು ಸಾಧ್ಯವಾಯಿತು.