ಟೋಕಿಯೋ ಒಲಂಪಿಕ್ಸ್ : ಮೀರಾಬಾಯಿ ಚನುಗೆ ಬೆಳ್ಳಿ ಬದಲು ಚಿನ್ನದ ಪದಕ ಸಿಗುವ ಸಾಧ್ಯತೆ?

106
firstsuddi

ಟೋಕಿಯೋ(ಜಪಾನ್): ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚನುಗೆ ಬೆಳ್ಳಿ ಬದಲು ಚಿನ್ನದ ಪದಕ ಸಿಗುವ ಸಾಧ್ಯತೆ ಇದೆ.

ಚೀನಾದ ಝಿಹೈ ಹು ಒಟ್ಟು 210 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಪಡೆದುಕೊಂಡಿದ್ದರು. ಆದರೆ ಇದೀಗ ಟೋಕಿಯೋದಲ್ಲಿ ಡೋಪಿಂಗ್ ವಿರೋಧಿ ಪ್ರಾಧಿಕಾರದಿಂದ ಪರೀಕ್ಷೆಗೊಳಗಾಗಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಲ್ಲಿನ ಅಧಿಕಾರಿಗಳು ಡೋಪಿಂಗ್ ಟೆಸ್ಟ್ ನಡೆಸುವ ಉದ್ದೇಶದಿಂದ ಝಿಹೈ ಹು ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗಿದ್ದು, ಟೆಸ್ಟ್ ವರದಿ ಪಾಸಿಟಿವ್ ಬಂದರೆ ಅವರಿಗೆ ನೀಡಿರುವ ಪದಕವನ್ನು ಭಾರತದ ಚನುಗೆ ನೀಡಲಾಗುತ್ತದೆ. ಹಾಗೆಯೇ ಬೆಳ್ಳಿ ಪದಕ ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ ಅವರ ಪಾಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.