ಡಿ.ಕೆ. ಶಿವಕುಮಾರ್ ಆಪ್ತ ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ…

61
firstsuddi

ಧಾರವಾಡ : ಕೆಪಿಸಿಸಿ ಆದ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಹಾಗೂ ಗುತ್ತಿಗೆದಾರ ಯು.ಬಿ. ಶೆಟ್ಟಿಯ ಮನೆ ಮೇಲೆ ಐಟಿ ದಾಳಿ ನಡೆದಿದೆ.

ನಗರದ ದಾಸನಕೊಪ್ಪ ಸರ್ಕಲ್ ನಲ್ಲಿರುವ ನಿವಾಸಕ್ಕೆ ಗೋವಾದಿಂದ ಬಂದಿರುವ ಐಟಿ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಯುಬಿ ಶೆಟ್ಟಿ ಅವರು ಉಡುಪಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ್ದಾರೆ. ಹೀಗಾಗಿ ಅವರ ಮೇಲೆ ಐಟಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಯುಬಿ ಶೆಟ್ಟಿ ಅವರು ಗುತ್ತಿಗೆ ಕಾಮಗಾರಿ ಬಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದರು ಎಂದು ಅವರ ಆಪ್ತರು ಹೇಳಿದ್ದಾರೆ.