ಡ್ರಗ್ಸ್ ಕೇಸ್ ; ಮೂವರ ಮನೆ ಮೇಲೆ ಪೊಲೀಸ್ ದಾಳಿ…

98
firstsuddi

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮನೆ ಮೇಲೆ ನಗರ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ಬೆನ್ಸನ್ ಟೌನ್ ನಿವಾಸಿ ಬ್ಯಾಂಡ್ ವಾದಕ ವಚನ್ ಚಿನ್ನಪ್ಪ, ರಾಜಾಜಿನಗರ ರಾಜ್ ಕುಮಾರ್ ರೋಡ್ ನಿವಾಸಿ ಸೋನಿಯಾ ಅಗರವಾಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಭರತ್ ಎಂಬುವರ ಮೇಲೆ ಇಂದು ಬೆಳ್ಳಂಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ನೈಜೀರಿಯಾ ಪ್ರಜೆಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಮ್ಮ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಇಂದು  ಮೂವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.