ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದರೆ ಹಿಜಬ್ ಧರಿಸಿ : ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್.

81
firstsuddi

ಭೋಪಾಲ್ : ಹಿಜಾಬ್ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ತಮ್ಮ ಮನೆಯಲ್ಲಿ ಸುರಕ್ಷಿತವಾಗಿಲ್ಲ ಅಂದರೆ ಹಿಜಬ್ ಧರಿಸಬಹುದು. ಆದರೆ ಶಾಲಾ-ಕಾಲೇಜುಗಳಲ್ಲಿ ಹಿಜಬ್ ಧರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ನಿನ್ನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದೂಗಳು ಮಹಿಳೆಯರನ್ನು ಪೂಜಿಸುತ್ತಾರೆ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ಇಲ್ಲಿ ಹೆಣ್ಣನ್ನು ಪೂಜಿಸುವುದು ಸನಾತನ ಸಂಸ್ಕೃತಿಯಾಗಿದೆ. ಹೆಣ್ಣಿನ ಸ್ಥಾನವೇ ಪ್ರಧಾನವಾಗಿರುವ ಈ ದೇಶದಲ್ಲಿ ಹಿಜಬ್ ಧರಿಸುವ ಅವಶ್ಯಕತೆಯಿದೆಯೇ? ಭಾರತದಲ್ಲಿ ಹಿಜಬ್ ಧರಿಸುವ ಅಗತ್ಯವಿಲ್ಲ. ತಮ್ಮ ಮನೆಗಳಲ್ಲಿ ತೊಂದರೆ ಎದುರಿಸುತ್ತಿರುವವರು ಅಲ್ಲಿ ಹಿಜಾಬ್ ಧರಿಸಬೇಕಾಗುತ್ತದೆ.

ಹೊರಗಿರುವಾಗ ಹಿಂದೂ ಸಮಾಜದಲ್ಲಿ ಇರುವವರೆಲ್ಲಾ ಹಿಜಬ್ ಧರಿಸುವ ಅಗತ್ಯವಿಲ್ಲ. ಆದರೆ ಮದರಸಾಗಳಲ್ಲಿ ಹಿಜಬ್ ಅಥವಾ ಖಿಜಬ್ ಧರಿಸಿ, ಅದು ಹೇಗೆ ನಮಗೆ ಸಂಬಂಧಿಸಿರುತ್ತದೆ? ಆದರೆ ನೀವು ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ ಶಿಸ್ತನ್ನು ಅಡ್ಡಿಪಡಿಸಿದರೆ ಅದನ್ನು ಮಾತ್ರ ಸಹಿಸಲಾಗುವುದಿಲ್ಲ ಎಂದು ಹೇಳಿದರು.