ತರಗತಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿನಿಯರಿಗೆ ಟಾಯ್ಲೆಟ್​ ಕ್ಲೀನ್​ ಮಾಡುವ ಶಿಕ್ಷೆ…

57
firstsuddi

ಗದಗ : ತರಗತಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿನಿಯರಿಗೆ ಶೌಚಾಲಯ ಶುಚಿಗೊಳಿಸುವ ಶಿಕ್ಷೆ ನೀಡಿದ ಘಟನೆ ಜಿಲ್ಲೆಯ ನಾಗಾವಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಶಿಕ್ಷಕಿಯ ಆದೇಶದನ್ವಯ 7ನೇ ತರಗತಿಯ ನಾಲ್ಕೈದು ವಿದ್ಯಾರ್ಥಿನಿಯರು ಶೌಚಾಲಯ ಶುಚಿ ಮಾಡಿದ್ದಾರಂತೆ. ಶೌಚಾಲಯ ಸ್ವಚ್ಛಗೊಳಿಸದಿದ್ದರೆ ಮಿಸ್ ಹೊಡೀತಾರೆ, ಅವರು ಹೇಳಿದ ಮೇಲೆ ಮಾಡಲೇಬೇಕಲ್ವಾ? ಅಂತ ಮಕ್ಕಳು ದೂರಿದ್ದಾರೆ. ಇದೇ ರೀತಿ 6ನೇ ತರಗತಿ ಮತ್ತು 7ನೇ ತರಗತಿ ಮಕ್ಕಳಿಗೂ ಟಾಯ್ಲೆಟ್ ಸ್ವಚ್ಛಗೊಳಿಸಲು ಮಿಸ್ ಹೇಳ್ತಾರೆ ಎಂದು ಮಕ್ಕಳು ಹೇಳಿದ್ದಾರೆ.

ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಕ್ಕೆ ನನ್ನ ಮೇಲೆ ಶಿಕ್ಷಕರು ಮತ್ತು ಅಧಿಕಾರಿಗಳು ದರ್ಪ ತೋರಿದ್ದಾರೆ ಎಂದು ಅಡುಗೆ ಸಹಾಯಕಿ ಆರೋಪಿಸಿದ್ದಾರೆ.