ತಾಯಿ, ಮಗುವಿನ ಭೀಕರ ಹತ್ಯೆ – ಪತಿಯ ಮೇಲೆ ಅನುಮಾನ…

95
firstsuddi

ತುಮಕೂರು : ತಾಯಿ ಹಾಗೂ ಮಗುವನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾವ್ಯ ಮತ್ತು ಜೀವನ್ ಕೊಲೆಯಾದವರು.

ಮನೆಯಲ್ಲೇ ಇಬ್ಬರ ಶವ ಪತ್ತೆಯಾಗಿದ್ದು, ಕೊಲೆ ಬಳಿಕ ಆಕೆಯ ಗಂಡ ನಾಪತ್ತೆಯಾಗಿದ್ದಾನೆ. ಹೀಗಾಗಿ ಕಾವ್ಯರನ್ನು ಗಂಡನೇ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.

ಕೌಟುಂಬಿಕ ಕಲಹ ಹಿನ್ನಲೆ ಕೊಲೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಸಿಪಿಐ ನದಾಫ್ ಹಾಗೂ ಚೇಳೂರು ಪೊಲೀಸರು ಭೆಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

ಘಟನೆ ಸಂಬಂಧ ಚೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.