ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್‍ರೌಂಡರ್ ಅಕ್ಷರ್ ಪಟೇಲ್.

95
firstsuddi

ಮುಂಬೈ: ಟೀಂ ಇಂಡಿಯಾದ ಆಲ್‍ರೌಂಡರ್ ಅಕ್ಷರ್ ಪಟೇಲ್ ಉದ್ಯಮಿ ಮೇಹಾ ಪಟೇಲ್ ಅವರನ್ನು ವಿವಾಹವಾಗಿದ್ದಾರೆ.

ನಿನ್ನೆ ಮೇಹಾ ಪಟೇಲ್ ಮತ್ತು ಅಕ್ಷರ್ ಪಟೇಲ್ ಮದುವೆ ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ವಡೋದರಾದಲ್ಲಿ ನಡೆದಿತ್ತು. ಮದುವೆ ಬಳಿಕ ಈ ಜೋಡಿಯ ಫೋಟೋ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಕ್ಷರ್ ಪಟೇಲ್ ಅವರ ಪತ್ನಿ ಮೇಹಾ ಪಟೇಲ್ ಆಹಾರ, ಪೌಷ್ಟಿಕ ತಜ್ಞೆಯಾಗಿದ್ದು, ತನ್ನದೇ ಆದ ಉದ್ಯಮವನ್ನು ಸಹ ನಡೆಸುತ್ತಿದ್ದಾರೆ.

ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅಕ್ಷರ್ ಪಟೇಲ್ ಕೂಡ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.