ವಿಜಯಪುರ : ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಒಂದು ವಾರಗಳ ಕಾಲ ಪ್ರತಿನಿತ್ಯ ಒಂದು ಶೋ ಉಚಿತವಾಗಿ ಪ್ರದರ್ಶಿಸಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಿರ್ಧರಿಸಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಕಾಶ್ಮೀರದಲ್ಲಿ ಜೀವಿಸುತ್ತಿದ್ದ ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರು ನಡೆಸಿಕೊಂಡ ರೀತಿಯನ್ನು ನಿರ್ದೇಶಕರು ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಮಗೂ ಅಲ್ಲಿನ ಪರಿಸ್ಥಿತಿ ಬರಬಹುದು . ಹೀಗಾಗಿ, ಜನತೆ ಈಗಲೇ ಎಚ್ಚೆತ್ತು ಈ ಸಿನಿಮಾ ವೀಕ್ಷಿಸಬೇಕು ಎಂದರು.
ಈ ಸಂಬಂಧ ಚಲನಚಿತ್ರ ಮಂದಿರದ ಮಾಲೀಕರ ಜತೆ ಮಾತುಕತೆ ನಡೆಸಿದ್ದು, ಒಂದು ವಾರಗಳ ಕಾಲ ಪ್ರತಿನಿತ್ಯ ಒಂದು ಶೋ ಉಚಿತವಾಗಿ ಪ್ರದರ್ಶಿಸಬೇಕು. ಅದಕ್ಕೆ ತಗಲುವ ಟಿಕೆಟ್ ವೆಚ್ಚವನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದೇನೆ. ನಮ್ಮ ಜಿಲ್ಲೆಯ ಜನ ಈ ಸಿನಿಮಾವನ್ನು ನೋಡಬಹುದಾಗಿದೆ ಎಂದಿದ್ದಾರೆ.










