ದೇಶದ 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ.

33

ನವದೆಹಲಿ: ದೇಶದ 10 ರಾಜ್ಯಗಳ 31 ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಉಪಚುನಾವಣೆ ಮೂಲಕ ಇದೇ ಮೊದಲ ಬಾರಿ ಚುನಾವಣ ಕಣಕ್ಕಿಳಿದಿದ್ದಾರೆ. ರಾಜಸ್ಥಾನದಲ್ಲಿ ಏಳು, ಪಶ್ಚಿಮ ಬಂಗಾಳದಲ್ಲಿ ಆರು, ಅಸ್ಸಾಂನಲ್ಲಿ ಐದು, ಬಿಹಾರದಲ್ಲಿ ನಾಲ್ಕು, ಕರ್ನಾಟಕದಲ್ಲಿ ಮೂರು, ಮಧ್ಯ ಪ್ರದೇಶದಲ್ಲಿ ಎರಡು, ಕೇರಳದ ಎರಡು ಮತ್ತು ಛತ್ತೀಸ್‍ಗಢ, ಗುಜರಾತ್ ಮತ್ತು ಮೇಘಾಲಯದಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ನವೆಂಬರ್ 23 ರಂದು ಫಲಿತಾಂಶ ಹೊರಬೀಳಲಿದೆ. ಅಸ್ಸಾಂನಲ್ಲಿ ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಧೋಲೈ, ಬೆಹಾಲಿ, ಸಮಗುರಿ, ಬೊಂಗೈಗಾಂವ್ ಮತ್ತು ಸಿದ್ಲಿ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.