ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನ…

75
firstsuddi

ಮುಂಬೈ : ಕಿರುತರೆ ಹಾಗೂ ಚಲನಚಿತ್ರ ನಟ, ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಿದ್ಧಾರ್ಥ್ ಶುಕ್ಲಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕೂಪರ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ. ಸಿದ್ಧಾರ್ಥ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಸಿದ್ಧಾರ್ಥ್ ಹಂಪ್ಟಿ ಶರ್ಮಾ ಕೆ ದುಲ್ಹನಿಯಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಖತ್ರೋನ್ ಕೆ ಖಿಲಾಡಿ, ಬಿಗ್ ಬಾಸ್ -13 (ವಿನ್ನರ್), ಝಲಕ್ ದಿಖ್ಲಾ ಜಾ – ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ‘ಬ್ರೋಕನ್ ಬಟ್ ಬ್ಯೂಟಿಫುಲ್ ಸೀಸನ್ 3’ ವೆಬ್ ಶೋನಲ್ಲಿ ಅಗಸ್ತ್ಯ ಪಾತ್ರದಲ್ಲಿ ನಟಿಸಿದ್ದರು.