ನನ್ನ ಟಚ್ ಮಾಡಿ ಅಯ್ಯೋ ಪಾಪ ಎನ್ನುವ ಸ್ಥಿತಿ ಡಿಕೆಶಿಗೆ ಬಂದಿದೆ : ಅಶ್ವತ್ಥ್ ನಾರಾಯಣ.

61
firstsuddi

ಬೆಂಗಳೂರು : ಡಿ.ಕೆ. ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡಿದ್ದು ಅವರ ತಪ್ಪು. ನನ್ನನ್ನು ಟಚ್ ಮಾಡಿಕೊಂಡು ಅಯ್ಯೋ ಪಾಪ ಎನ್ನುವ ಪರಿಸ್ಥಿತಿ ಡಿ.ಕೆ. ಶಿವಕುಮಾರ್ ಗೆ ಬಂದಿದೆ ಎಂದು ಸಚಿವ ಅಶ್ವಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ನಟಿ ರಮ್ಯಾ ಟ್ವೀಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಬಹಳ ಬಿಲ್ಡಪ್ ಕೊಡುತ್ತಿದ್ದರು. ಆದರೆ, ಒಂದು ಹೆಣ್ಣು ಮಗಳಿಂದ ಅವರಿಗೆ ಈಗ ಶೇಪ್ ಔಟ್ ಆಗಿದೆ. ಇಂಥವರು ನಮ್ಮ ಅಧ್ಯಕ್ಷರಾ ಎಂದು ಕಾಂಗ್ರೆಸ್ ನವರು ಮುಜುಗರ ಅನುಭವಿಸುತ್ತಿದ್ದಾರೆ. ಅಶ್ವತ್ಥ್ ನಾರಾಯಣನ ಗೌರವ ಹಾಳು ಮಾಡುತ್ತೇನೆ ಎಂದು ಹೊರಟಿದ್ದರು. ಆದರೆ, ಈಗ ಅವರೇ ಗೌರವ ಕಳೆದುಕೊಂಡು ಆಗಿ ಐಸೋಲೇಟ್ ಆಗಿದ್ದಾರೆ ಎಂದು ಕುಟುಕಿದರು.

ನನ್ನ ಬಗ್ಗೆ ಮಾತನಾಡಿ ಅವರ ವ್ಯಕ್ತಿತ್ವವನ್ನು ಅವ್ರೇ ಹೇಳಿಕೊಳ್ಳುವ ಹಾಗೆ ಆಯ್ತು. ಇದು ನನಗೆ ಸಂತೋಷದ ವಿಚಾರ. ಡಿಕೆ ಶಿವಕುಮಾರ್ ರಾಂಗ್ ನಂಬರ್ ಡಯಲ್ ಮಾಡ್ತಾರೆ. ರಾಂಗ್ ನಂಬರ್ ಗೆ ಡಯಲ್ ಮಾಡಿ ಹೀಗೆ ಮಾಡಿಕೊಂಡಿದ್ದಾರೆ. ಬಿಲ್ಡಪ್ ಕೊಡೋಕೆ ಹೋಗಿ ಶೇಪ್ ಔಟ್ ಮಾಡಿಕೊಂಡಿದ್ದಾರೆ. ನನಗೆ ಡಿ.ಕೆ ಶಿವಕುಮಾರ್ ಬಗ್ಗೆ ಅನುಕಂಪ ಇಲ್ಲ. ಸಜ್ಜನರ ಮೇಲೆ ಮಾತ್ರ ನನಗೆ ಅನುಕಂಪ ಇದೆ ಅಷ್ಟೆ ಎಂದು ವ್ಯಂಗ್ಯವಾಡಿದರು.

ಅವರದೇ ಪಕ್ಷದ ಹೆಣ್ಣು ಮಗಳ ತೇಜೋವಧೆ ಮಾಡಿದರೆ ಏನಾಗುತ್ತೆ ಎನ್ನುವ ಬಿಸಿ ಶಿವಕುಮಾರ್ ಗೆ ಆಗಿದೆ. ಸ್ನೇಹಗಳನ್ನು, ಸಂಬಂಧಗಳನ್ನು ಪ್ರಶ್ನೆ ಮಾಡುವ ಕೀಳು ಮಟ್ಟಕ್ಕೆ ಡಿ.ಕೆ.ಶಿವಕುಮಾರ್ ಇಳಿದಿದ್ದರು. ಡಿ.ಕೆ.ಶಿವಕುಮಾರ್ ವರ್ತನೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಇನ್ನು ಮುಂದೆಯಾದ್ರು ಹೀಗೆ ಮಾತನಾಡೋದನ್ನು ಡಿ.ಕೆ ಶಿವಕುಮಾರ್ ಬಿಡಬೇಕು ಎಂದರು.